ಕಾಂಗ್ರೆಸ್ ಮೊದಲು ಇಟಲಿ ರಾಜಮಾತೆ ಸೆರಗಿನಿಂದ ಹೊರ ಬರಲಿ: ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ

ಕಾಂಗ್ರೆಸ್ (Congress) ಮೊದಲು ಇಟಲಿ ರಾಜಮಾತೆ (Italy royal mother) ಸೆರಗಿನಿಂದ ಹೊರ ಬರಲಿ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginkai) ಹೇಳಿದ್ದಾರೆ. ಮೊದಲು ಕಾಂಗ್ರೆಸ್ಸಿಗರು ತಮ್ಮ ಪಂಚೆ ಗಟ್ಟಿಯಾಗಿ ಇಟ್ಟುಕೊಳ್ಳಿ. ಈ ಹಿಂದೆ ಕೆಲವು ಸಲ ನಿಮ್ಮ ಪಂಚೆ ಕಳಚಿತ್ತು ಎಂದು ಟೆಂಗಿನಕಾಯಿ ಹೇಳಿದರು. ಪಂಚೆ ಸರಿ ಮಾಡ್ಕೊಳ್ಳಿ ಎಂದು ಹೇಳಿದ್ದನ್ನು ನಾವು ನೋಡಿದ್ದೇವೆ. ಕಾಂಗ್ರೆಸ್​ನವರು ಗ್ಯಾರಂಟಿ ಜಾರಿ ಮಾಡದೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಏನೇ ಮಾಡಿದ್ರೂ ಕೌಂಟರ್ ಅಟ್ಯಾಕ್ ಮಾಡುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ (BJP MLA from Hubballi) ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.