ವಿಜಯ್ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಆದಾಗ್ಯೂ ಅವರು ಸುಮ್ಮನೆ ಕೂತಿಲ್ಲ. ನೋವನ್ನು ಮರೆಯಲು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈಗ ವಿಜಯ್ ರಾಘವೇಂದ್ರ ಅವರು ಟಿವಿ9 ಹಮ್ಮಿಕೊಂಡಿದ್ದ ‘TV9 Real Estate Expo 2023’ಗೆ ಆಗಮಿಸಿದ್ದರು. ಈ ವೇಳೆ ಅವರು ತಮ್ಮ ನಟನೆಯ ‘ಕದ್ದ ಚಿತ್ರ’ದ ಬಗ್ಗೆಯೂ ಮಾತನಾಡಿದರು. ಈ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ‘ಸ್ಪಂದನಾಗೆ ಈ ಚಿತ್ರವನ್ನು ನೋಡಬೇಕು ಎನ್ನುವ ಆಸೆ ಇತ್ತು. ಮೇಲಿದ್ದುಕೊಂಡೇ ಅವಳು ಎಲ್ಲವನ್ನೂ ನೋಡುತ್ತಿದ್ದಾಳೆ’ ಎಂದಿದ್ದಾರೆ ವಿಜಯ್ ರಾಘವೇಂದ್ರ.