ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಹಂಚಾಳ ಗೇಟ್ ಬಳಿ ಎಟಿಎಂ ನಲ್ಲಿ ಭಾರೀ ಹಣ ಕಳ್ಳತನವಾಗಿದೆ. ಗ್ಯಾಸ್ ಕಟ್ಟರ್ ಬಳಸಿಕೊಂಡು ಎಟಿಎಂನಲ್ಲಿದ್ದ ಹಣ ಕಳ್ಳತನ ಮಾಡಲಾಗಿದೆ. ಹಂಚಾಳಗೇಟ್ ಬಳಿಯಿದ್ದ ಕೆನರಾ ಬ್ಯಾಂಕ್ ಗೆ ಸೇರಿದ ATM ನಲ್ಲಿದ್ದ ಸುಮಾರು 15 ಲಕ್ಷ ರೂಪಾಯಿ ಕಳ್ಳತನವಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ರಮೇಶ್ ಹಾಗೂ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.