ನಮ್ಮಣ್ಣ ಪಠಾಣ್ ಪಠಾಣನೂ ಹೌದು ಮತ್ತು ಪೈಲ್ವಾನನೂ ಹೌದು ಎಂದು ಮಾತು ಆರಂಭಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಶಿಗ್ಗಾವಿ ಕ್ಷೇತ್ರವನ್ನು ಪ್ರತಿನಿಧಿಸುವವರು ನಿಜಕ್ಕೂ ಭಾಗ್ಯವಂತರು ಯಾಕೆಂದರೆ ಇದು ಸಂತ ಶಿಶುನಾಳ ಷರೀಫ ಮತ್ತು ಭಕ್ತ ಕನಕದಾಸ ಜನಿಸಿದ ನಾಡು, ದಾಸರು ಕುಲ ಕುಲವೆಂದು ಬಡಿದಾಡದಿರಿ ಅಂತ ಹಾಡಿದರೆ ಷರೀಫರು ಒಂಬತ್ತು ತೂತಿನ ಗಡಿಗೆ ಅನ್ನೋ ನೀತಿಪದವನ್ನು ನಮಗೆ ಬಿಟ್ಟುಹೋದರು ಅಂತ ಹೇಳಿದರು.