ಡಾ. ರಾಜ್ಕುಮಾರ್ ಕುಟುಂಬದ ಕುಡಿ ಧನ್ಯಾ ರಾಮ್ಕುಮಾರ್ ಅವರು ‘ಕಾಲಾಪತ್ಥರ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬುಧವಾರ (ಅ.11) ಈ ಸಿನಿಮಾದ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಧನ್ಯಾ ರಾಮ್ಕುಮಾರ್ ಅವರ ತಾಯಿ ಪೂರ್ಣಿಮಾ, ಹಿರಿಯ ನಟಿ ತಾರಾ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಆಗಮಿಸಿ ಶುಭ ಕೋರಿದರು. ಮಗಳ ಸಿನಿಮಾದ ಬಗ್ಗೆ ಪೂರ್ಣಿಮಾ ಅವರು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ‘ಈ ಸೌಂಡ್ ಕೇಳಿದ ಮೇಲೆ ನನಗೆ ಅನಿಸುತ್ತಿರುವುದು ಒಂದೇ. ಧನ್ಯನಿಗೆ ಈ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದ್ದು ಅವಳ ಭಾಗ್ಯ. ತುಂಬ ಚೆನ್ನಾಗಿ ಮೂಡಿಬಂದಿದೆ. ಈ ಸಿನಿಮಾದ ನಿರ್ಮಾಪಕರು ಹಾಗೂ ಇಡೀ ತಂಡಕ್ಕೆ ಒಳ್ಳೆಯ ಭವಿಷ್ಯ ಸಿಗಲಿ’ ಎಂದು ಪೂರ್ಣಿಮಾ ಹಾರೈಸಿದ್ದಾರೆ.