ಗಂಗೊಳ್ಳಿ ನಿವಾಸಿ ರೋಹಿತ್ ಎಂಬುವವರು 3 ವರುಷಗಳ ನಂತರ ದುಬೈನಿಂದ ತಾಯ್ನಾಡಿಗೆ ಮರಳಿ ಬಂದಿದ್ದಾರೆ. ಆದರೆ ಅವರು ಬರುವುದನ್ನು ತಮ್ಮ ತಾಯಿಗೆ ತಿಳಿಸಿಲ್ಲ. ತನ್ನ ತಾಯಿ ಸುಮಿತ್ರರಿಗೆ ತಿಳಿಸದೇ ಸರ್ಪ್ರೈಸ್ ಕೊಡಲು ಮುಂದಾಗಿದ್ದಾರೆ. ತಾಯಿ ಎಂದಿನಂತೆ ಗಂಗೊಳ್ಳಿ ಬಂದರಿನ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುತ್ತಿದ್ರು. ಈ ವೇಳೆ ರೋಹಿತ್ ಅವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮುಖವನ್ನು ಮರೆ ಮಾಚಿಸಿ ತಾಯಿಯ ಮುಂದೆ ಬಂದು ನಿಂತು ಮೀನು ವ್ಯಾಪಾರ ಮಾಡಿದ್ದಾರೆ. ಅಷ್ಟರಲ್ಲೇ ಮಗನ ಧ್ವನಿಯನ್ನು ಗುರುತಿಸಿದ ತಾಯಿ ಮುಖದ ಮೇಲಿನ ಬಟ್ಟೆ ಸರಿಸಿ ಮಗನನ್ನು ಅಪ್ಪಿಕೊಂಡು ಮುದ್ದಾಡಿದ್ದಾರೆ.