ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್

ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು. ಬೆಂಗಳೂರಿನ ಅರಸು ಕಾಲೋನಿಗೆ ಭೇಟಿ ನೀಡಿದ ಅಶೋಕ್, ಇದು ಮನೆಹಾಳು ಸರ್ಕಾರ. ಬಡವರ ಅನ್ನ ಕಸಿದ ಇವರಿಗೆ ನರಕಕ್ಕೆ ಹೋದರೂ ಜಾಗ ಸಿಗದು ಎಂದು ಅವರು ಕಿಡಿ ಕಾರಿದರು.