ಅಭಿವೃದ್ಧಿ ಮಾಡದಿದ್ದರೆ ರಾಜಕೀಯ ತ್ಯಾಗ ಮಾಡಲು ಸಿದ್ಧ: ತಮ್ಮದೇ ಸರ್ಕಾರದ ವಿರುದ್ಧ ಗುಡುಗಿದ ಸಿ‌ಎಸ್​ ನಾಡಗೌಡ

ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಬಿಜೆಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಸಿ‌.ಎಸ್.ನಾಡಗೌಡ, ಸರ್ಕಾರ ನಿರೀಕ್ಷೆ ಮಾಡಿದ ಮಟ್ಟದಲ್ಲಿ ರಾಜ್ಯ ಅಭಿವೃದ್ಧಿ ಮಾಡಬೇಕು. ಅಭಿವೃದ್ಧಿ ಮಾಡದಿದ್ದರೆ ರಾಜಕಾರಣ ಮಾಡುವ ಇಚ್ಛೆ ನನಗೆ ಇಲ್ಲ. ಆ ಮೂಲಕ ಅಭಿವೃದ್ಧಿ ಅನುದಾನ ನೆಪದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.