ರಾಜಭವನಕ್ಕೆ ಹೊರಟ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮುಖಭಾವಗಳನ್ನು ಕೊಂಚ ಗಮನಿಸಿ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಒಲ್ಲದ ಮನಸ್ಸಿನಿಂದ ಮೆರವಣಿಗೆಯಲ್ಲಿ ಭಾಗಿಯಾದಂತಿದೆ. ಅಶೋಕ ಜೊತೆ ಅವರು ಕೂಡ ನೇತೃತ್ವ ವಹಿಸಬೇಕಿತ್ತು. ಆದರೆ ಅವರನ್ನು ಬಲವಂತದಿಂದ ಕರೆದುಕೊಂಡು ಬಂದಿರುವ ಹಾಗೆ ಭಾಸವಾಗುತ್ತದೆ.