ಕಟಕ್‌ನಲ್ಲಿ ಅರ್ಧಕ್ಕೆ ನಿಂತ ಪಂದ್ಯ; ಮೈದಾನ ತೊರೆದ ಎಲ್ಲಾ ಆಟಗಾರರು..!
ಕಟಕ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಪ್ರಸ್ತುತ ಅರ್ಧಕ್ಕೆ ನಿಂತಿದೆ. ಇದಕ್ಕೆ ಕಾರಣ ಮೈದಾನದಲ್ಲಿ ಅಳವಡಿಸಲಾಗಿರುವ ಫ್ಲಡ್ ಲೈಟ್ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಮಂದ ಬೆಳಕಿನಿಂದಾಗಿ ಅಂಪೈರ್ಗಳು ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.