ಉಗ್ರಂ ಮಂಜು ಮತ್ತು ಗೌತಮಿ ಜಾದವ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋಗೆ ಬಂದಾಗಿನಿಂದಲೂ ಆಪ್ತವಾಗಿದ್ದಾರೆ. ಆದರೆ ಈ ವಾರ ಅವರ ಸ್ನೇಹ ಮುರಿದು ಬಿದ್ದಿದೆ. ಸುದೀಪ್ ಅವರು ಹೇಳಿದ ಒಂದೇ ಒಂದು ಮಾತಿನಿಂದ ಇಬ್ಬರ ನಡುವೆ ಅಂತರ ಉಂಟಾಗಿದೆ. ಭಾನುವಾರದ (ನ.24) ಸಂಚಿಕೆಯಲ್ಲಿ ಈ ವಿಷಯದ ಬಗ್ಗೆ ವಿವರ ಸಿಗಲಿದೆ. ಈ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.