ತಮ್ಮ ಎನ್ಡಿಎ ಸರ್ಕಾರ ಕಲ್ಯಾಣ ಕರ್ನಾಟಕವನ್ನು ಕಡೆಗಣಿಸಿಲ್ಲ, ಹಲವಾರು ಎಕ್ಸ್ಪ್ರೆಸ್ ವೇಗಳು ಈ ಭಾಗದ ಮೂಲಕವೇ ಹಾದುಹೋಗುತ್ತವೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಏನು ಮಾಡಿದರೇನು ಬಂತು, ಕಲಬುರಗಿಗೆ ಮಂಜೂರಾಗಿದ್ದ ಸ್ಮಾರ್ಟ್ ಸಿಟಿ ಯೋಜನೆಯನ್ನು ಧಾರವಾಡಕ್ಕಾಗಿ ಕಿತ್ತುಕೊಂಡಿರಿ ಅಂತ ಪತ್ರಕರ್ತರು ಹೇಳಿದಾಗ ಶೆಟ್ಟರ್ ಏನು ಉತ್ತರಿಸಬೇಕೆಂದು ಹೊಳೆಯದೆ ಮತ್ತೊಮ್ಮೆ ನಕ್ಕರು.