ಸಂವಿಧಾನ ಬದಲಾವಣೆ ಬಗ್ಗೆ ಎನ್​ಡಿಎ ವಿರುದ್ಧ ವಿಪಕ್ಷಗಳಿಂದ ಸುಳ್ಳು ಆರೋಪ; ಪ್ರಲ್ಹಾದ್ ಜೋಶಿ

ಎನ್‌ಡಿಎ ಸಂವಿಧಾನ ಬದಲಿಸಿ ಮೀಸಲಾತಿ ಅಂತ್ಯಗೊಳಿಸಲಿದೆ ಎಂದು ಪ್ರತಿಪಕ್ಷಗಳು ಸುಳ್ಳು ಆರೋಪ ಮಾಡುತ್ತಿವೆ, ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ಉಳಿಸಲು ಸದಾ ಬದ್ಧವಾಗಿದೆ, ಆದರೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರೇ ಸಂವಿಧಾನದ ಕತ್ತು ಹಿಸುಕುತ್ತಿರುವ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಬಿಹಾರದ ಪಾಟ್ನಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.