ಉತ್ತರ ಪ್ರದೇಶದಲ್ಲಿ ತಮ್ಮ ನಾಯಕನಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ಕಾರ್ಯಕರ್ತ!

ಉತ್ತರ ಪ್ರದೇಶದ ಜಾನ್‌ಪುರದಲ್ಲಿ ಹಾರ ಹಾಕಿ ಸ್ವಾಗತ ಭಾಷಣ ಮಾಡಿದ ನಂತರ ಮಹೇಂದ್ರ ರಾಜ್‌ಭರ್ ಅವರಿಗೆ ವ್ಯಕ್ತಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ, ಓಂ ಪ್ರಕಾಶ್ ರಾಜ್‌ಭರ್ ಅವರ ಒಕ್ಕೂಟದಡಿಯಲ್ಲಿ ಬಿಜೆಪಿ ಮಿತ್ರ ಪಕ್ಷವಾಗಿ ರಾಜಕಾರಣಿ ಮುಖ್ತಾರ್ ಅನ್ಸಾರಿ ವಿರುದ್ಧ ಸ್ಪರ್ಧಿಸಿದ್ದರು. ಆದರೆ ಸುಮಾರು 6,000 ಮತಗಳಿಂದ ಸೋತರು.