ದೆಹಲಿಯ ಹವಾಮಾನದಲ್ಲಿ ಹಠಾತ್ ಬದಲಾವಣೆ ಗೋಚರಿಸಿದೆ. ಧೂಳಿನ ಬಿರುಗಾಳಿಗೆ ಗೋಡೆಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಬಿದ್ದ ಪರಿಣಾಮ ಓರ್ವ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಈ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೆಹಲಿಯ ಮಧು ವಿಹಾರ್‌ನಲ್ಲಿ ಗೋಡೆ ಕುಸಿದು ಅದರ ಅವಶೇಷಗಳು ವ್ಯಕ್ತಿ ಮೇಲೆ ಬಿದ್ದು ಅವರು ಸಾವನ್ನಪ್ಪಿದ್ದಾರೆ.