ಬೆಂಗಳೂರಿನಿಂದ ತಿರುಪತಿಗೆ ಸತತ 13ನೇ ವರ್ಷ ಪಾದಯಾತ್ರೆ ಹೊರಟ ಭಕ್ತರು

ಕಲ್ಯಾಣದ ನಿಮಿತ್ತ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿ ಅಂತ 30 ಕ್ಕೂ ಅಧಿಕ ಜನ ಭಕ್ತರು ಬೆಂಗಳೂರಿನಿಂದ ತಿರುಪತಿಗೆ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಚಲ್ಲಹಳ್ಳಿ ಗ್ರಾಮದಿಂದ 30 ಕ್ಕೂ ಅಧಿಕ ಭಕ್ತರು 6 ದಿನಗಳ ತಿರುಮಲ ತಿರುಪತಿ ಪಾದಯಾತ್ರೆ ಹೊರಟಿದ್ದು ಪಾದಯಾತ್ರಿಗಳಿಗೆ ಗ್ರಾಮಸ್ಥರು ಬೀಳ್ಕೊಡುಗೆ ಕೊಟ್ಟಿದ್ದಾರೆ. ಕಳೆದ 12 ವರ್ಷಗಳಿಂದ ಪ್ರತಿ ವರ್ಷ ಗ್ರಾಮಸ್ಥರು ಪಾದಯಾತ್ರೆ ಮಾಡ್ತಿದ್ದು 13 ನೇ ವರ್ಷವು ಯಾತ್ರೆಯನ್ನ ಮುಂದುವರೆಸಿದ್ದಾರೆ.