ರೇವಣ್ಣನ ಮನೆಯಲ್ಲಿ ಸಂತ್ರಸ್ತೆ

ಸಂತ್ರಸ್ತೆಯು ದೂರಿನಲ್ಲಿ ತನ್ನನ್ನು ನಗರದಲ್ಲಿರುವ ಈ ಮನೆಗೂ ಕರೆತರಲಾಗಿತ್ತು ಎಂದು ದಾಖಲಿಸಿರುವಂತಿದೆ. ಹಾಗಾಗೇ, ಸ್ಥಳದ ಮಹಜರ್ ನಡೆಸಲು ಅವರನ್ನು ಅಧಿಕಾರಿಗಳು ಇಲ್ಲಿಗೆ ಕರೆತಂದಿರುತ್ತಾರೆ. ಶನಿವಾರದಂದು ಬಂಧನಕ್ಕೊಳಗಾಗಿರುವ ರೇವಣ್ಣರನ್ನು 4-ದಿನ ಎಸ್ಐಟಿ ಕಸ್ಟಡಿಗೆ ಒಪ್ಪಿಸಲಾಗಿದೆ. ಸೆಕ್ಸ್ ಟೇಪುಗಳ ಇನ್ನೊಬ್ಬ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದು ಅವರ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿಮಾಡಲಾಗಿದೆ.