ಸಿದ್ದರಾಮಯ್ಯ ಟೇಪ್ ಕಟ್ ಮಾಡಲು ಆಣಿಯಾಗುತ್ತಿರುವಾಗ ಒಬ್ಬ ವ್ಯಕ್ತಿ (ಯಾರೂಂತ ಗೊತ್ತಿಲ್ಲ) ಗುಂಪಿನಿಂದ ತೂರಿಕೊಂಡು ಮುಂದೆ ಬಂದು ಸಿಎಂ ಎಡಕ್ಕಿರುವ ಮಹಿಳಾ ವೈದ್ಯಾಧಿಕಾರಿಗೆ ಹಿಂದೆ ಸರಿಯುವಂತೆ ಹೇಳುತ್ತಾನೆ. ಆ ಮೇಡಂ ಏನೋ ಹೇಳುತ್ತಾರೆ. ವ್ಯಕ್ತಿಗೆ ಸಿದ್ದರಾಮಯ್ಯ ಜೊತೆ ಕಾಣಿಸಿಕೊಳ್ಳುವ ತವಕ, ಆತುರ. ಮಹಿಳಾ ವೈದ್ಯೆಯನ್ನು ಮೊಣಕೈಯಿಂದ ಅಕ್ಷರಶಃ ಹಿಂದೆ ತಳ್ಳಿ ಗೂಳಿಯಂತೆ ಮುನ್ನುಗ್ಗುತ್ತಾನೆ!