ಚಿಕ್ಕಮಗಳೂರು: ಗಗನಕ್ಕೇರಿದ ತರಕಾರಿ ಬೆಲೆ ಕಾಫಿನಾಡಿನ ಜನತೆಯನ್ನು ಫುಲ್ ಗರಂ ಆಗಿಸಿದೆ. ಯಾರಿಗೆ ಬೇಕು ಈ ಬಿಟ್ಟಿ ಭಾಗ್ಯ, ಮೊದಲು ರೇಟ್ ಕಮ್ಮಿ ಮಾಡಿ ಸಾಕು. ಸಾಮಾನ್ಯ ಜನರ ದುಡ್ಡನ್ನ ತಗೊಂಡು, ಬಿಟ್ಟಿ ಭಾಗ್ಯ ಕೊಡ್ತಾ ಇದ್ದೀರಾ? ರಾಜಕಾರಣಿಗಳು ಅವರ ಮನೆಯಿಂದ ತಂದು ಬಿಟ್ಟಿ ಭಾಗ್ಯ ಕೊಡಲ್ಲ. ಫ್ರೀ ಭಾಗ್ಯಗಳಿಂದ ಎಲ್ಲದರ ಬೆಲೆ ಜಾಸ್ತಿಯಾಗಿದೆ. ತರಕಾರಿ ಇಲ್ಲದೆ ಅಡುಗೆ ಮಾಡುವ ಸ್ಥಿತಿ ಬಂದಿದೆ. ಒಂದು ಕೆಜಿ ತರಕಾರಿ ಬದಲು 1/4 ಕೆ.ಜಿ ತೆಗೆದುಕೊಳ್ಳುವ ಸ್ಥಿತಿ ಬಂದಿದೆ. ಟೊಮ್ಯಾಟೊ ಇಲ್ಲದೆ ಅಡುಗೆ ಮಾಡೋದು ಬೆಟರ್ ಅನ್ನಿಸುತ್ತಿದೆ. ಸಾಮಾನ್ಯ ಜನ ಬದುಕೋದೇ ಕಷ್ಟವಾಗಿದೆ. ನಮ್ಮ ದೇಶ ಉಳಿಬೇಕು ಅಂದ್ರೆ ಫ್ರೀ ಭಾಗ್ಯ ತೆಗೆಯಬೇಕು, ರಾಜಕಾರಣಿಗಳ ತಪ್ಪಿಗೆ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಚಿಕ್ಕಮಗಳೂರು ಜನತೆ ತರಕಾರಿ ಬೆಲೆ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.