ಹೆಚ್​​ಡಿ ಕುಮಾರಸ್ವಾಮಿಗೆ ಕರಿಯ ಎಂದಿದ್ದಕ್ಕೆ ಕ್ಷಮೆಯಾಚಿಸಿದ ಜಮೀರ್​​​

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಸಿಪಿ ಯೋಗೇಶ್ವರ ಪರ ಪ್ರಚಾರ ಮಾಡುತ್ತಿರುವ ವೇಳೆ ಸಚಿವ ಜಮೀರ್ ಅಹ್ಮದ್​ ಹೆಚ್​ಡಿ ಕುಮಾರಸ್ವಾಮಿ ಅವರನ್ನು "ಕರಿಯ ಕುಮಾರಸ್ವಾಮಿ" ಅಂತ​ ಸಂಬೋಧಿಸಿದ್ದರು. ಇದರಿಂದ ಜೆಡಿಎಸ್​ ಕಾರ್ಯಕರ್ತರು, ನಾಯಕರು ಆಕ್ರೋಶಗೊಂಡಿದ್ದರು. ಇದೀಗ ಜಮೀರ್​ ಅಹ್ಮದ್​ ಕ್ಷಮೆಯಾಚಿಸಿದ್ದಾರೆ.