ಜೈಲಿನೊಳಗೆ ದರ್ಶನ್ ಜೊತೆ ನಡೆದ ಮಾತುಕಥೆ ಬಗ್ಗೆ ವಿನೋದ್ ರಾಜ್ ಭಾವುಕ ಪ್ರತಿಕ್ರಿಯೆ

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ನಟ ದರ್ಶನ್​ ಅವರ ಪರಿಸ್ಥಿತಿಯ ಬಗ್ಗೆ ವಿನೋದ್​ ರಾಜ್​ ವಿವರಿಸಿದ್ದಾರೆ. ‘ಜೈಲಿನಲ್ಲಿ ದರ್ಶನ್​ ಕಳೆದಿರುವ 33 ದಿನ ತುಂಬ ಕಷ್ಟ. ಸ್ವಾತಂತ್ರ ಇಲ್ಲದೇ ಒಂದೇ ಜಾಗದಲ್ಲಿ ಕುಳಿತು, ಯೋಚನೆ ಮಾಡುತ್ತಾ ಅವರು ಎಷ್ಟು ಸೊರಗಿರಬಹುದು ಅಂತ ನನ್ನ ಮನಸ್ಸಿಗೆ ನೋವಾಗುತ್ತಿದೆ’ ಎಂದು ವಿನೋದ್​ ರಾಜ್​ ಹೇಳಿದ್ದಾರೆ.