ರಾಷ್ಟ್ರಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಈ ಕ್ರೀಡಾಪಟುಗಳು, ಆದರೆ ಇಬ್ಬರಿಗೂ ಬಡತನ ಕಾಡ್ತಿದೆ, ನೆರವು ಬೇಕಾಗಿದೆ

ಅವರಿಬ್ಬರೂ ಕಡು ಬಡತನದ ಕುಟುಂಬದಲ್ಲಿ ಜನಿಸಿದ್ದವರು. ಆದರೆ ಅವರಿಬ್ಬರಿಗೂ ಕ್ರೀಡೆ ಅಂದ್ರೆ ಅಚ್ಚು ಮೆಚ್ಚ. ಚಿಕ್ಕವಯಸ್ಸಿನಲ್ಲೇ ಓಲಂಪಿಕ್ ನಲ್ಲಿ ಭಾಗವಹಿಸಿ ಭಾರತಕ್ಕೆ ಪದಕ ತರಬೇಕು ಅಂತ ಕನಸು ಕಂಡವರು. ಅದರಂತೆ ಪರಿಶ್ರಮದಿಂದ ರಾಜ್ಯಮಟ್ಟದ ಕ್ರೀಡೆಯಲ್ಲಿ ಆಡಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆದ್ರೆ ಈಗ ಅದೇ ಬಡತನ ಅವರಿಬ್ಬರಿಗೂ ಅಡ್ಡಿಯಾಗಿದೆ.