ಮಂತ್ರಾಲಯದ ರಾಯರ 353ನೇ ಆರಾಧನಾ ಮಹೋತ್ಸವ; ಸಂಸದ ಯದುವೀರ್ ಭಾಗಿ

ಮಂತ್ರಾಲಯದ ರಾಯರ ಆರಾಧನಾ ಮಹೋತ್ಸವ (Sri Raghavendra Swamy Aradhana Mahotsava) ಹಿನ್ನೆಲೆ ರಾಯರ ಮಠದಲ್ಲಿ ಸಂಭ್ರಮ ಕಳೆಗಟ್ಟಿದೆ. ಮಂತ್ರಾಲಯದ ರಾಯರ ಮಠದಲ್ಲಿಂದು ಉತ್ತರಾಧನೆ ಸಂಭ್ರಮ ಮನೆ ಮಾಡಿದ್ದು ರಾಯರ ಆರಾಧನೆಯಲ್ಲಿ ಸಂಸದ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಭಾಗಿಯಾಗಿದ್ದಾರೆ. ನಿನ್ನೆ ರಾತ್ರಿಯಿಂದಲೇ ವಿವಿಧ ಕಾರ್ಯಕ್ರಮಗಳಲ್ಲಿ ಯದುವೀರ್ ಭಾಗಿಯಾಗಿದ್ದಾರೆ.