ನೋವಿನಿಂದ ಮೌನಕ್ಕೆ ಜಾರಿದ ಸ್ಪಂದನಾ ತಂದೆ ಬಿಕೆ ಶಿವರಾಂ

ಸ್ಪಂದನಾ ಅವರು ಮಾಜಿ ಪೊಲೀಸ್ ಅಧಿಕಾರಿ ಬಿಕೆ ಶಿವರಾಂ ಅವರ ಮಗಳು. ಸ್ಪಂದನಾರನ್ನು ಕಳೆದುಕೊಂಡು ಶಿವರಾಂಗೆ ದಿಕ್ಕೇ ತೋಚದಂತೆ ಆಗಿದೆ. ಒಂದು ಕಡೆ ಅಳಿಯ ವಿಜಯ್ ರಾಘವೇಂದ್ರ ಅವರನ್ನು ಸಮಾಧಾನ ಮಾಡಬೇಕು. ಮತ್ತೊಂದು ಕಡೆ ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳಬೇಕು. ಈ ಕಾರಣಕ್ಕೆ ಶಿವರಾಂ ಅವರು ಮಾತೇ ಬಾರದೆ ನಿಂತಿದ್ದಾರೆ. ಅವರ ದುಃಖವನ್ನು ಯಾರಿಂದಲೂ ನೋಡಲು ಸಾಧ್ಯವಾಗುತ್ತಿಲ್ಲ.