ಶಾಸಕ ಸುರೇಶ್ ಕುಮಾರ್​ರನ್ನು ಎಳೆದಾಡಿದ ಪೊಲೀಸರು

ಪೊಲೀಸರ ವರ್ತನೆಯಿಂದ ಕೋಪಾವಿಷ್ಠರಾದ ಸುರೇಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಭಟನೆ ನಡೆಸುತ್ತಿದ್ದ ಹನುಮ ಭಕ್ತರನ್ನು ಯಾವ ಕಾರಣಕ್ಕಾಗಿ ಬಂಧಿಸಿದ್ದು, ಬಿಡಿ ಅವರನ್ನು ಅಂತ ಅವರು ಆರ್ಭಟಿಸಿದ ಕೂಡಲೇ ಮೆತ್ತಗಾದ ಪೊಲೀಸರು ಮುಕೇಶ್ ಸೇರಿದಂತೆ ವಶಕ್ಕೆ ಪಡೆದಿದ್ದ ಎಲ್ಲ ಹಿಂದೂ ಕಾರ್ಯಕರ್ತರನ್ನು ಬಿಡುಗಡೆ ಮಾಡಿದರು.