ಭಾರತ-ಪಾಕ್​ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್‌, ಈ ಬಾರಿಯೂ ಮೈನವಿರೇಳಿಸುವ ಸಂಭ್ರಮ

ಪ್ರತಿ ವರ್ಷದಂತೆ 2023 ರ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ನಿನ್ನೆ ಸೋಮವಾರ (ಆಗಸ್ಟ್​ 14) ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು ಆಯೋಜಿಸಲಾಗಿತ್ತು. ಬೀಟಿಂಗ್ ರಿಟ್ರೀಟ್ ಸಮಾರಂಭಕ್ಕಾಗಿ ಅಟ್ಟಾರಿ-ವಾಘಾ ಗಡಿಯಲ್ಲಿ ಭಾರಿ ಜನಸಮೂಹ ಜಮಾಯಿಸಿತ್ತು. ಜನರು ದೇಶಭಕ್ತಿಯ ಗೀತೆಗಳನ್ನು ಹಾಡುತ್ತಾ, ನೃತ್ಯ ಮಾಡುತ್ತಾ, ಭಾರತದ ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದಂತೆ ವಾತಾವರಣವು ಸಂಭ್ರಮಾಚರಣೆಯಿಂದ ತುಂಬಿತು.