ಶಾಸಕ ವಿಜಯಾನಂದ ಕಾಶಪ್ಪನವರ್

ಲೋಕಸಭಾ ಚುನಾವಣೆಯಲ್ಲಿ ತಮ್ಮ ಪತ್ನಿ ವೀಣಾ ಕಾಶಪ್ಪನವರ್ ಅವರಿಗೆ ಬಾಗಲಕೋಟೆ ಕ್ಷೇತ್ರದ ಟಿಕೆಟ್ ಸಿಗದೇ ಹೋಗಿದ್ದು ಪತಿ-ಪತ್ನಿ ಇಬ್ಬರಲ್ಲಿ ಬಹಳ ಬೇಸರ ಮೂಡಿಸಿದೆ. ಟಿಕೆಟ್​ಗಾಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಪಾರವಾಗಿ ನೆಚ್ಚಿಕೊಂಡಿದ್ದು ಸುಳ್ಳಲ್ಲ. ಆದರೆ ಟಿಕೆಟ್ ಸಚಿವ ಶಿವಾನಂದ ಪಾಟೀಲ್ ಮಗಳಿಗೆ ಸಿಕ್ಕಿತು. ಆ ಬೇಸರ ವಿಜಯಾನಂದ್ ಅವರನ್ನು ಸಿಎಂ ಮೇಲೆ ಮುನಿಸಿಕೊಳ್ಳುವಂತೆ ಮಾಡಿದೆಯೇ?