‘ಸಮುದ್ರಂ’ ಸಿನಿಮಾ ವಿವಾದ; ಈ ಕಿರಿಕ್​ ಶುರುವಾಗಿದ್ದು ಹೇಗೆ ಎಂಬುದನ್ನು ವಿವರಿಸಿದ ಅನಿತಾ ಭಟ್​

ನಟಿ ಅನಿತಾ ಭಟ್​ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಅವರ ‘ಸಮುದ್ರಂ’ ಸಿನಿಮಾ ಈಗ ವಿವಾದಕ್ಕೆ ಸಿಲುಕಿದೆ. ನಿರ್ಮಾಪಕಿ ರಾಜಲಕ್ಷ್ಮಿ ಅವರು ಚಿತ್ರತಂಡದ ಇನ್ನುಳಿದವರ ಮೇಲೆ ಆರೋಪ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಅನಿತಾ ಭಟ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಕಿರಿಕ್​ ಹೇಗೆ ಶುರುವಾಯಿತು ಎಂಬುದನ್ನು ಅನಿತಾ ಭಟ್​ ಅವರು ವಿವರಿಸಿದ್ದಾರೆ. ‘ಮೋಷನ್​ ಪೋಸ್ಟರ್​ ಲಾಂಚ್​ ಮಾಡಿಸಿದ ಬಳಿಕ ಎಲ್ಲ ಕಡೆ ನನ್ನ ಹೆಸರು ಬಂತು. ತಮ್ಮ ಹೆಸರು ಬಂದಿಲ್ಲ ಎಂಬ ಕಾರಣಕ್ಕೆ ರಾಜಲಕ್ಷ್ಮಿ ಅವರಿಗೆ ಕೀಳರಿಮೆ ಶುರುವಾಯಿತು ಎನಿಸುತ್ತದೆ. ಆಗ ಅವರು ಪೂರ್ಣ ಪ್ರಮಾಣದಲ್ಲಿ ನಿರ್ಮಾಪಕಿ ಆಗಲು ಮುಂದೆಬಂದರು. ಅಂದು ಮಾತನಾಡಿಕೊಂಡು ಹೋದವರು ಎಲ್ಲವನ್ನೂ ಎತ್ತಿಕೊಂಡು ಹೋದರು. ಈಗ ಹಾರ್ಡ್​ ಡಿಸ್ಕ್​ ಇಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಚೇಂಬರ್​ಗೂ ದೂರು ನೀಡಲಾಗಿದೆ’ ಎಂದು ಅನಿತಾ ಭಟ್​ ಅವರು ಹೇಳಿದ್ದಾರೆ.