ಕಾರ್ಕಳದ ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಪೂಜಾ ಹೆಗ್ಡೆಗೆ ಸನ್ಮಾನ

ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿ ಅವರು ಕರ್ನಾಟಕಕ್ಕೆ ಆಗಮಿಸಿ ಕೋಲವನ್ನು ವೀಕ್ಷಿಸಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು. ಈಗ ಬಾಲಿವುಡ್ನ ಮತ್ತೋರ್ವ ನಟಿ ಪೂಜಾ ಹೆಗ್ಡೆ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಣಜಾರುಗೆ ಭೇಟಿ ನೀಡಿದ್ದಾರೆ. ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಜರುಗಿದೆ. ಇದಕ್ಕೆ ಪೂಜಾ ಹೆಗ್ಡೆ ಅವರು ಕೂಡ ಆಗಮಿಸಿದ್ದರು. ಈ ವೇಳೆ ಅವರು ಬ್ರಹ್ಮಕಲಶೋತ್ಸವ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಪೂಜಾ ಹೆಗ್ಡೆಯನ್ನು ದೇವಸ್ಥಾನದ ಸಮಿತಿಯ ಸದಸ್ಯರು ಗೌರವಿಸಿದ್ದಾರೆ. ಅಭಿಮಾನಿಯೊರ್ವ ಪೂಜಾ ಹೆಗ್ಡೆಯ ಭಾವಚಿತ್ರವನ್ನು ರಚಿಸಿದ್ದ. ಇದನ್ನು ಸನ್ಮಾನ ಸಂದರ್ಭದಲ್ಲಿ ನೀಡಲಾಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.