ವೈರಿಗಳು ಹೆಚ್ಚಿದ್ದಾರೆ, ಕುಕ್ಕಬೇಡ: ಕಟೀಲ್​ಗೆ ಎಚ್ಚರಿಕೆ ನೀಡಿದ್ದ ಅಜ್ಜಾವರ ವಿಷ್ಣುಮೂರ್ತಿ ದೈವ

ದಕ್ಷಿಣ ಕನ್ನಡ ಜಿಲ್ಲೆಯ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪಿದೆ. ಈ ನಡುವೆ, ಒಂದು ವಾರದ ಹಿಂದೆಯೇ ಕಟೀಲ್​ಗೆ ಸುಳ್ಯ ತಾಲೂಕಿನ ಅಜ್ಜಾವರದ ವಿಷ್ಣುಮೂರ್ತಿ ದೈವ ಎಚ್ಚರಿಕೆ ನೀಡಿತ್ತು ಎನ್ನುವ ವಿಚಾರ ಇದೀಗ ತಿಳಿದುಬಂದಿದೆ. ಅಲ್ಲದೆ, ಕುರುಕ್ಷೇತ್ರದಲ್ಲಿ ಅರ್ಜನನಿಗೆ ಕೃಷ್ಣ ನೆರವಾದರಂತೆ ನಾನು ನಿನ್ನನ್ನು ಕೊಂಡೊಯ್ಯುತ್ತೇನೆ ಎಂದು ಅಭಯ ನೀಡಿದೆ.