ರಾಜ್ ಕುಟುಂಬದ ಸದಸ್ಯರು ಅಣ್ಣಾವ್ರ ಸಮಾಧಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ರಾಘವೇಂದ್ರ ರಾಜ್ಕುಮಾರ್ ಅವರು ಮಾತನಾಡಿದ್ದಾರೆ. ‘ನೀವು ಇದನ್ನು ಸಮಾಧಿ ಅಂತ ಕರೆಯಬೇಡಿ. ದಯವಿಟ್ಟು ಬೃಂದಾವನ ಅಂತ ಕರೆಯಿರಿ ಎಂದು ನನಗೆ ಐಎಎಸ್ ಆಫೀಸರ್ ಒಬ್ಬರು ಬರೆದು ಕಳಿಸಿದ್ದರು. ಬೃಂದಾವನ ಅಲ್ಲದೇ ಹೋಗಿದ್ದರೆ ಇಂದಿಗೂ ಇಷ್ಟು ಜನ ಯಾಕೆ ಬರುತ್ತಿದ್ದರು? ಪ್ರತಿ ವರ್ಷ ಅಭಿಮಾನಿಗಳು ಅನೇಕ ಕಾರ್ಯಗಳನ್ನು ಮಾಡುತ್ತಿದ್ದಾರೆ’ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.