ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ

ಏನಾಗುತ್ತಿದೆಯೆಂದರೆ ಮಾಧ್ಯಮದವರು ಕಾಣಿಸಿದಾಕ್ಷಣ ನಮ್ಮ ಜನಪ್ರತಿನಿಧಿಗಳು ತಮಗೆ ಗೊತ್ತಿರುವುದಕ್ಕಿಂತ ಹೆಚ್ಚು ಗೊತ್ತಿಲ್ಲದಿರುವ ಬಗ್ಗೆ ಮಾತಾಡುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಬದಲಾವಣೆ ಬಗ್ಗೆ ಕಾಂಗ್ರೆಸ್ ನಾಯಕರು ಮತ್ತು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿ ನಾಯಕರು ತಮ್ಮ ಮುಂದೆಯೇ ಆಯಾ ಪಕ್ಷಗಳ ವರಿಷ್ಠರು ಮಾತಾಡಿದರು ಎಂಬಂತೆ ಹೇಳಿಕೆ ನೀಡುತ್ತಾರೆ. ಸರಿ ಏನು ಅಂತ ಯದುವೀರ್​ರನ್ನು ನೋಡಿ ತಿಳಿದುಕೊಳ್ಳಬೇಕು.