ಸುಯೇಶ್ ಗೂಗ್ಲಿಗೆ ಗಿರ್ಕಿ ಹೊಡೆದ ಡೇಂಜರಸ್ ರಸೆಲ್

107 ರನ್​ಗಳಿಗೆ 2ನೇ ವಿಕೆಟ್ ಕಳೆದುಕೊಂಡು ಕೆಕೆಆರ್ 150 ರನ್ ಆಗುವಷ್ಟರಲ್ಲಿ ಪ್ರಮುಖ 6 ವಿಕೆಟ್​ಗಳನ್ನು ಕಳೆದುಕೊಂಡಿತು. ಅದರಲ್ಲೂ ಡೆತ್ ಓವರ್​ಗಳಲ್ಲಿ ಡೇಂಜರಸ್ ಆಗಬಲ್ಲ ವೆಸ್ಟ್ ಇಂಡೀಸ್​ನ ಸ್ಫೋಟಕ ಬ್ಯಾಟ್ಸ್‌ಮನ್ ಆಂಡ್ರೆ ರಸೆಲ್ ಅವರನ್ನು ಸುಯೇಶ್ ಶರ್ಮಾ ಬಲಿ ಪಡೆದರು. 16ನೇ ಓವರ್​ನ 4ನೇ ಎಸೆತವನ್ನು ಸಿಕ್ಸರ್​ಗಟ್ಟಲು ಯತ್ನಿಸಿದ ರಸೆಲ್ ಕ್ಲೀನ್ ಬೌಲ್ಡ್ ಆದರು. ರಸೆಲ್ ಈ ಪಂದ್ಯದಲ್ಲಿ ಕೇವಲ 4 ರನ್ ಬಾರಿಸಲಷ್ಟೇ ಶಕ್ತರಾದರು.