SM Krishna No More: ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲಿ ನಡೆಯುತ್ತಿರುವ ವಿಧಿವಿಧಾನಗಳ ಬಗ್ಗೆ ವಿವರಣೆ ನೀಡುತ್ತಾ ಎಸ್ ಎಂ ಕೃಷ್ಣ ರಾಜಕೀಯ ಬದುಕಿನ ಸಾಧನೆಗಳನ್ನು ಹೇಳುತ್ತಿದ್ದಾರೆ. ನಿನ್ನೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಹೇಳಿದಂತೆ, ಕೃಷ್ಣ ಅವರು ನಾಲ್ಕೂ ಸದನಗಳ ಸದಸ್ಯರಾಗಿ ಜನಸೇವೆ ಮಾಡಿದವರು, ಬೆಂಗಳೂರು ನಗರವನ್ನು ಸಿಲಿಕಾನ್ ವ್ಯಾಲಿಯಾಗಿ ಪರಿವರ್ತಿಸಿ ಇಡೀ ಜಗತ್ತೇ ಅದರತ್ತ ಬೆರಗುಗಣ್ಣಿಂದ ನೋಡುವಂತೆ ಮಾಡಿದವರು.