2023 ರಲ್ಲಿ ತಮ್ಮ ಸರ್ಕಾರ ಆಧಿಕಾರಕ್ಕೆ ಬಂದಾಗ ಜನಕ್ಕೆ ನೀಡಿದ ಭರವಸೆಯಂತೆ 10 ಕೇಜಿ ನೀಡಲು ಮುಂದಾದಾಗ ಹಣ ಕೊಡುತ್ತ್ತೇವೆಂದರೂ ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ. 5 ಕೇಜಿ ಅಕ್ಕಿಯ ಬದಲು ತಮ್ಮ ಸರ್ಕಾರ ಜನರಿಗೆ ಹಣ ನೀಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. 10 ಕೇಜಿ ಅಕ್ಕಿ ಕೊಟ್ಟರೆ ಜನರೆಲ್ಲ ಸಿದ್ದರಾಮಯ್ಯನ ಕಡೆ ಆಗಿಬಿಡುತ್ತಾರೆ ಎಂಬ ಒಂದೇ ಕಾರಣಕ್ಕೆ ಬಿಜೆಪಿಯವರು ಬಡವರಿಗೆ ಅಕ್ಕಿ ಸಿಗದಂತೆ ಮಾಡಿದರು ಎಂದು ಸಿದ್ದರಾಮಯ್ಯ ಹೇಳಿದರು.