Mys Shivanna Cc 3

ಶಿವರಾಜ್ ಕುಮಾರ್ ಅವರ ಹತ್ತಿರದ ಸಂಬಂಧಿ, ಸಹೋದರ ಸಮಾನ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಇತ್ತೀಚೆಗಷ್ಟೆ ಹೃದಯಾಘಾತದಿಂದ ಅಗಲಿದ್ದಾರೆ. ಸ್ಪಂದನಾ ಇಲ್ಲವಾದ ಸುದ್ದಿ ತಿಳಿಯುತ್ತಲೇ ಶೂಟಿಂಗ್ ಬಿಟ್ಟು ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದು ವಿಜಯ್ ರಾಘವೇಂದ್ರ ಗೆ ಸಾಂತ್ವನ ಹೇಳಿದ್ದರು ಶಿವಣ್ಣ. ಇಂದು (ಆಗಸ್ಟ್ 12) ಮೈಸೂರಿನಲ್ಲಿ 'ಜೈಲರ್' ಸಿನಿಮಾ ವೀಕ್ಷಣೆಗೆಂದು ಆಗಮಿಸಿದ್ದಾಗ ಮತ್ತೊಮ್ಮೆ ಸ್ಪಂದನಾ ಅವರನ್ನು ನೆನಪು ಮಾಡಿಕೊಂಡರು.