ಅಶೋಕ ಮಾತಿನಿಂದ ಅಸಮಾಧಾನಗೊಂಡ ಕೋನರೆಡ್ಡಿ, ವಿರೋಧ ಪಕ್ಷದ ನಾಯಕರಾಗಿರುವ ಅಶೋಕ ಅವರೇ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಋಣಾತ್ಮಕವಾಗಿ ಮಾತಾಡಿದರೆ ಜನ ಅಲ್ಲಿಗೆ ಹೇಗೆ ಹೋದಾರು? ಅವರ ಮಾತು ಖಾಸಗಿ ಆಸ್ಪತ್ರೆಗಳಿಗೆ ನೆರವಾಗುವಂತಿದೆ, ಅವರು ನೆಗೆಟಿವ್ ಕಾಮೆಂಟ್ಗಳನ್ನು ಮಾಡೋದು ಬಿಟ್ಟು ಸರ್ಕಾರೀ ಆಸ್ಪತ್ರೆಗಳ ಗುಣಮಟ್ಟ ಸುಧಾರಿಸಲು ಸಲಹೆ ನೀಡಲಿ ಎಂದರು.