ಸರ್ಕಾರದ ಖಜಾನೆಯ ಹಣ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮನೆಗೆ ಹೋಗಿದೆ. ಖಜಾನೆ ಖಾಲಿ ಮಾಡಿದ ಲೂಟಿಕೋರ ಸರ್ಕಾರ ತೊಲಗಬೇಕು. ಡಿಕೆ ಶಿವಕುಮಾರ್ ಅವರೇ ನೀವು ತಿಹಾರ್ ಜೈಲಿಗೆ ಹೋಗಿ ಬಂದಿದ್ದೀರಿ. ಇದೀಗ ಎರಡನೇ ಸಲ ತಿಹಾರ್ ಜೈಲಿಗೆ ಹೋಗಲು ಸಿದ್ದರಾಗಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರು ಹೊರವಲಯದ ಕಾವೂರು ಬಳಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಈ ಹೇಳಿಕೆ ನಿಡಿದ್ದಾರೆ.