‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾಗೆ ಸಂಕಷ್ಟ ಎದುರಾಗಿದೆ. ನಟಿ ರಮ್ಯಾ ದಿವ್ಯಾ ಸ್ಪಂದನ ಅವರು ಸಿನಿಮಾ ತಂಡದ ವಿರುದ್ಧ ಕೇಸ್ ಹಾಕಿದ್ದಾರೆ. 1 ಕೋಟಿ ರೂಪಾಯಿ ಪರಿಹಾರ ನೀಡಬೇಕು, ತಮ್ಮ ದೃಶ್ಯವನ್ನು ಸಿನಿಮಾದಿಂದ ತೆಗೆದು ಹಾಕಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲಾ ಕಾರಣದಿಂದ ಸಿನಿಮಾ ತಂಡ ಸಂಕಷ್ಟಕ್ಕೆ ಸಿಲುಕಿದೆ. ‘ಶೂಟಿಂಗ್ ಟೈಮ್ನಲ್ಲಿ ರಮ್ಯಾ ಸ್ವೀಟ್ ಆಗಿದ್ರು. ನಮ್ಮದು ಯಂಗ್ಸ್ಟರ್ ಸಿನಿಮಾ ಎಂದು ಕೊಂಡಾಡಿದ್ದರು. ಆದರೆ, ಈಗ ಅವರು ಈ ರೀತಿ ಮಾಡಿದ್ದು ಬೇಸರ ಮೂಡಿಸಿದೆ’ ಎಂದಿದ್ದಾರೆ ನಿರ್ಮಾಪಕ ವರುಣ್.