ಮುಸ್ಲಿಂ ಕುಟುಂಬದಿಂದ ಅಯ್ಯಪ್ಪ ಮಾಲೆಧಾರಿಗಳಿಗೆ ಅನ್ನಪ್ರಸಾದ

ಸಮುದಾಯಗಳ ನಡುವೆ ಭಾವೈಕ್ಯತೆಯ ಅವಶ್ಯಕತೆಯಿದೆ, ಸಹೋದರತ್ವ ಮತ್ತು ಸಹಬಾಳ್ವೆ ನಮ್ಮ ದೇಶದ ಸಂಸ್ಕೃತಿಯಲ್ಲಿ ಮೇಳೈಸಿವೆ, ಯಾರನ್ನೂ ಮೆಚ್ಚಿಸಲು ನಾವು ಇದನ್ನು ಮಾಡುತ್ತಿಲ್ಲ ಎಂದು ಕರೀಂ ಸಾಬ್ ಹೇಳುತ್ತಾರೆ. ಈ ಕುಟುಂಬದ ಭ್ರಾತೃತ್ವ ಮತ್ತು ಬೇರೆ ಧರ್ಮಗಳು ಮತ್ತ್ತು ಅವುಗಳ ಆಚರಣೆಯ ಬಗ್ಗೆ ಇರುವ ಆದರಣೆ ಹಾಗೂ ಪ್ರೀತಿ ನಿಜಕ್ಕೂ ಅನುಕರಣೀಯ.