‘ನಾನು ಕೈ ಎತ್ತಿಲ್ಲ, ಅವರೇ ಬಿದ್ದರು’: ನಿರ್ಮಾಪಕರ ಗೋವಾ ಗಲಾಟೆ ಬಗ್ಗೆ ಆಂತರ್ಯ ಸತೀಶ್​ ಪ್ರತಿಕ್ರಿಯೆ

ಕರ್ನಾಟಕ ಫಿಲ್ಮ್​ ಚೇಂಬರ್​ ಪದಾಧಿಕಾರಿಗಳು ಕೆಲವೇ ದಿನಗಳ ಹಿಂದೆ ಗೋವಾಗೆ ತೆರಳಿದ್ದರು. ಎಲ್ಲರೂ ಒಟ್ಟಾಗಿ ಇರುವ ಸಂದರ್ಭದಲ್ಲಿ ಕೆಲವು ನಿರ್ಮಾಪಕರ ನಡುವೆ ಮಾತಿನ ಚಕಮಕಿ ನಡೆಯಿತು. ಪಾರ್ಟಿ ನಡೆಯುವ ಸಂದರ್ಭದಲ್ಲಿ ಎ. ಗಣೇಶ್​ ಹಾಗೂ ರಥಾವರ ಮಂಜುನಾಥ್​ ಮೇಲೆ ಆಂತರ್ಯ ಸತೀಶ್​ ಅವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ತಮ್ಮ ಮೇಲಿನ ಆರೋಪಕ್ಕೆ ಈಗ ಆಂತರ್ಯ ಸತೀಶ್​ ಅವರು ಪ್ರತಿಕ್ರಿಯಿಸಿದ್ದಾರೆ. ‘ಗೋವಾ ಟ್ರಿಪ್​ನಲ್ಲಿ ಪಾರ್ಟಿ ಮಾಡುವಾಗ ನಾನು ಡ್ಯಾನ್ಸ್​ ಮಾಡುತ್ತಿದ್ದೆ. ಅವರು ಏಕಾಏಕಿ ಬಂದು ನನಗೆ ಬೈಯ್ದರು. ರಥಾವರ ಮಂಜುನಾಥ್​ ಮತ್ತು ಎ. ಗಣೇಶ್​ ಅವರು ನನ್ನನ್ನು ರೇಗಿಸಿದರು. ಆಗ ಅವರು ಚೆನ್ನಾಗಿ ಕುಡಿದಿದ್ದರು. ನಾನು ಅವರ ಮೇಲೆ ಕೈ ಎತ್ತಿಲ್ಲ. ನೂಕಾಟದಲ್ಲಿ ಅವರೇ ಕೆಳಗಡೆ ಬಿದ್ದರು. ಅವರವರೇ ತಳ್ಳಾಟ ಆಡಿದರು. ಅವರು ಹೇಳುತ್ತಿರುವುದೆಲ್ಲ ಸುಳ್ಳು. ಸಿಸಿಟಿವಿ ದೃಶ್ಯ ತೆಗೆಸಿ ನೋಡಿದರೆ ಗೊತ್ತಾಗುತ್ತದೆ’ ಎಂದು ಆಂತರ್ಯ ಸತೀಶ್​ ಹೇಳಿದ್ದಾರೆ.