ವಿಷಯ ಗೊತ್ತಾಗುತ್ತಿದ್ದಂತೆಯೇ ಆಟಗಾರರರ ಸತ್ಕಾರ ಸಮಾರಂಭವನ್ನು ಕೂಡಲೇ ಮುಗಿಸುವ ಕೆಲಸಕ್ಕೆ ಮುಂದಾದೆವು, ಕೇವಲ ಒಂದು ಸುತ್ತಿನ ಸತ್ಕಾರ ಮಾತ್ರ ಸಾಧ್ಯವಾಗಿದ್ದು, ತಾವ್ಯಾರೂ ಭಾಷಣ ಮಾಡಲಿಲ್ಲ, ಭದ್ರತೆಯ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ, ಇದ್ದ ಸಮಾಯಾಕಾಶದಲ್ಲೇ ಪೊಲೀಸರು ಅತ್ಯುತ್ತಮ ಕೆಲಸ ಮಾಡಿದ್ದಾರೆ, ಅವರನ್ನು ದೂರುವುದರಲ್ಲಿ ಪ್ರಯೋಜನವಿಲ್ಲ ಎಂದು ಶಿವಕುಮಾರ್ ಹೇಳಿದರು.