ಮನೆಗೆ ನುಗ್ಗಿದ ಚಿರತೆಯಿಂದ ನಾಯಿಯ ಮೇಲೆ ಅಟ್ಯಾಕ್; ಶಾಕಿಂಗ್ ವಿಡಿಯೋ ವೈರಲ್

ಚಿರತೆಯೊಂದು ಮನೆಯಲ್ಲಿದ್ದ ಕಪ್ಪು ಲ್ಯಾಬ್ರಡಾರ್ ನಾಯಿಯ ಮೇಲೆ ದಾಳಿ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಈ ವೇಳೆ ಮಹಿಳೆಯೊಬ್ಬರು ಮನೆಯ ಒಳಗಿನಿಂದ ಕಿರುಚಾಡುತ್ತಾ ಬಂದಿದ್ದಾರೆ. ಆಗ ಚಿರತೆ ತನ್ನ ಹಿಡಿತವನ್ನು ಸಡಿಲಗೊಳಿಸಿತು. ಗಾಯಗೊಂಡ ಲ್ಯಾಬ್ರಡಾರ್ ಚಿರತೆಯ ಮೇಲೆ ಹಾರಲು ನೋಡಿತು. ತಕ್ಷಣ ಆ ಮಹಿಳೆ ನಾಯಿಯನ್ನು ಮನೆಯೊಳಗೆ ಎಳೆದುಕೊಂಡು ಬಾಗಿಲು ಹಾಕಿದ್ದಾರೆ.