ಟ್ರಾಫಿಕ್​ ಜಾಮ್​​ ಮಾಡ್ತಿದ್ದ ಜಾನುವಾರುಗಳು ಗೋಶಾಲೆಗೆ ಸ್ಥಳಾಂತರ

ಯಾದಗಿರಿ: ಜಾನುವಾರುಗಳು (Cattle) ರಸ್ತೆಗಳಲ್ಲಿ ಹಂಪ್​​ಗಳಾಗಿ ಟ್ರಾಫಿಕ್​ ಜಾಮ್​​ (Traffic Jam) ಗೆ ತನ್ನ ಕೊಡುಗೆ ನೀಡುವುದು ಎಲ್ಲಾ ಊರುಗಳಲ್ಲಿಯೂ ಇದ್ದಿದ್ದೇ. ಆದರೆ ಇದು ಯಾದಗಿರಿಯಲ್ಲಿ ತುಸು ಜಾಸ್ತಿಯೇ ಇದೆ. ಹಾಗಾಗಿ ಯಾದಗಿರಿಯಲ್ಲಿ ತಡ ರಾತ್ರಿ ನಗರಸಭೆಯಿಂದ ಆಪರೇಷನ್ ಪುಣ್ಯಕೋಟಿ ನಡೆದಿದೆ. ವಾಹನ ಸವಾರರಿಗೆ ಅಕ್ಷರಶಃ ಅಡ್ಡಿಯಾಗಿದ್ದ, ರಸ್ತೆ ಮೇಲೆ ಓಡಾಡ್ತಿದ್ದ ಜಾನುವಾರಗಳನ್ನು ಹಿಡಿದು ರಕ್ಷಣೆ ಮಾಡಿ ಸ್ಥಳಾಂತರ ಮಾಡಲಾಗಿದೆ. ನಗರಸಭೆ ಪೌರಾಯುಕ್ತ ಸಂಗಪ್ಪ ಉಫಾಸೆ ನೇತೃತ್ವದಲ್ಲಿ ಈ ಆಪರೇಷನ್ ಪುಣ್ಯಕೋಟಿ ನಡೆದಿದೆ. ಈ ಹಿಂದೆಯೇ ಜಾನುವಾರುಗಳನ್ನ ರಸ್ತೆ ಮೇಲೆ ಬಿಡದಂತೆ ಸೂಚನೆ ನೀಡಿದ್ರೂ ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ. ಹೀಗಾಗಿ ನಗರಸಭೆ ಅಧಿಕಾರಿಗಳು ಪುಣ್ಯಕೋಟಿ ಹೆಸರಿನಲ್ಲಿ ಆಪರೇಷನ್ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ (Goshala, Yadgir).