ಅವರನ್ನು ಸೋಲಿಸಿದ್ದು ಯಾರದ್ದೋ ಜಿದ್ದಲ್ಲ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿಯೂ ಅಲ್ಲ, ಜನ ಅವರನ್ನು ಸೋಲಿಸಿದ್ದಾರೆ, ಅಂಥ ಕೆಲಸಗಾರನನ್ನು ಸೋಲಿಸಿರುವುದು ವೇದನೆಯನ್ನುಂಟು ಮಾಡುತ್ತದೆ ಎಂದು ಸಚಿವ ಹೇಳಿದರು. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಿಂದ ಹೇಳುವುದಾದರೆ, ಕಾಂಗ್ರೆಸ್ ಪಕ್ಷದ ಪ್ರದರ್ಶನ ಬಹಳ ಚೆನ್ನಾಗಿದೆ, ಕಳೆದ ಬಾರಿ ಕೇವಲ ಒಂದು ಸೀಟು ಸಿಕ್ಕಿತ್ತು, ಈ ಬಾರಿ 9ನ ಸಿಕ್ಕಿವೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.