ಮೊದಲಿಗೆ ಅವರು ಡೊಳ್ಳು ಬಾರಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು. ಡೊಳ್ಳನ್ನು ಹೆಗಲಿಗೇರಿಸಿದ ಕೂಡಲೇ ಅವರಿಗೆ ಬಾರಿಸುವುದು ಗೊತ್ತಾಗಲ್ಲ, ತಡವರಿಸುತ್ತಾರೆ. ಗುಂಪಿನಲ್ಲಿರುವವರು ಬಾರಿಸುವುದನ್ನು ಗಮನಿಸಿ, ಆಲಿಸಿ ನಾದ ಹಿಡಿದು ಹುರುಪಿನಿಂದ ಆವೇಶಕ್ಕೊಳಗಾದವರಂತೆ ಬಾರಿಸತೊಡಗುತ್ತಾರೆ. ಅಮೇಲೆ ಕುಣಿತ. ಶಾಸಕ ತುಕಾರಾಂ ನುರಿತ ಪಟುವಿನಂತೆ ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕುತ್ತಾರೆ.