ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ವರ್ಷಗಳೇ ಆಗಿವೆ. ಆದರೆ ಪ್ರತಿ ದಿನವೂ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಚಿತ್ರಗಳು, ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಪುನೀತ್ ರಾಜ್ಕುಮಾರ್ ವ್ಯಕ್ತಿತ್ವವೇ ಹಾಗಿತ್ತು. ಅವರದ್ದು ಚುಂಬಕ ವ್ಯಕ್ತಿತ್ವ. ಅವರ ಸರಳತೆ, ಎಲ್ಲರೊಟ್ಟಿಗೆ ಮಗುವಂತೆ ಬೆರೆವ ಗುಣದಿಂದಲೇ ಅವರು ಎಲ್ಲರಿಗೂ ಇಷ್ಟವಾಗುತ್ತಿದ್ದರು. ಅಪ್ಪು ಅವರ ಹಳೆಯ ವಿಡಿಯೋ ಇಲ್ಲಿದೆ, ಅವರು ಏಕೆ ಎಲ್ಲರಿಗೂ ಇಷ್ಟವಾಗುತ್ತಿದ್ದರು ಎಂಬುದಕ್ಕೆ ಸಣ್ಣ ಸಾಕ್ಷಿ ಇದು.