‘ಯಾವ ಫ್ಯಾನ್ಸ್​ ಕೂಡ ಇಷ್ಟು ಕೀಳು ಮಟ್ಟಕ್ಕೆ ಇಳಿಯಲ್ಲ’: ಸ್ನೇಹಿತನ ಮೇಲಿನ ಹಲ್ಲೆಗೆ ಧ್ರುವ ಪ್ರತಿಕ್ರಿಯೆ

ಖ್ಯಾತ ನಟ ಧ್ರುವ ಸರ್ಜಾ ಅವರ ಜಿಮ್​ ಟ್ರೇನರ್​, ಸ್ನೇಹಿತ ಪ್ರಶಾಂತ್​ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ಆಗಿದೆ. ಮಚ್ಚಿನಿಂದ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಧ್ರುವ ಸರ್ಜಾ ಅವರು ಮಾಧ್ಯಮಗಳ ಎದುರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಗೂ ಫ್ಯಾನ್ಸ್​ ವಾರ್​ಗೂ ಏನಾದರೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಧ್ರುವ ಸರ್ಜಾ ಅವರು ಸ್ಪಷ್ಟನೆ ನೀಡಿದ್ದಾರೆ. ‘ದಯವಿಟ್ಟು, ಸಂಬಂಧ ಇಲ್ಲದ ವಿಷಯದಿಂದ ಸುದ್ದಿ ಮಾಡಬೇಡಿ. ಯಾವ ಫ್ಯಾನ್ಸ್​ ಕೂಡ ಇಷ್ಟು ಕೀಳುಮಟ್ಟಕ್ಕೆ ಇಳಿದು ಮಾಡಲ್ಲ. ಫ್ಯಾನ್ಸ್​ ವಾರ್​ ಅಂತ ಯಾರೂ ಅಂದುಕೊಳ್ಳಬೇಡಿ. ಅಷ್ಟು ಚೀಪ್​ ಯಾರೂ ಇಲ್ಲ. ಇದು ಕೇವಲ ಪ್ರಶಾಂತ್​ ಅವರಿಗೆ ಸಂಬಂಧಿಸಿದ್ದು ಅಷ್ಟೇ. ತನಿಖೆ ಆಗುತ್ತಿದೆ, ಎಲ್ಲವೂ ಗೊತ್ತಾಗುತ್ತದೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.