ಬಿಟ್ಟುಹೋದ ಯುವತಿಯ ಜೊತೆಯೇ ಮದುವೆ ಮಾಡಿಸಿ ಅಂತ ಪೊಲೀಸರ ಬೆನ್ನುಬಿದ್ದ ಪ್ರೇಮಿ

ಬೆಂಗಳೂರಿನಲ್ಲೊಬ್ಬ ವಿಚಿತ್ರ ಪಾಗಲ್ ಪ್ರೇಮಿ..! ಬಿಟ್ಟೋದ ಯುವತಿಯನ್ನು ಮದುವೆ ಮಾಡಿಸಿ ಅಂತ ಪೊಲೀಸರ ಬೆನ್ನು ಬಿದ್ದ ಪ್ರೇಮಿ.. ಪ್ರೀತಿ ಪ್ರೇಮ ಅಂತ ಜೊತೆಯಾದ್ಳು, ಜೊತೆಯಾಗಿ ನಿಂತು ನೋಡ್ಕೊಂಡೆ.. ಮದುವೆ ಅಂದ ತಕ್ಷಣ ಜಾತಿ ನೆಪ ಹೇಳಿ ಬಿಟ್ಟೋದ್ಳು ಅಂತ ಪೊಲೀಸರ ಮುಂದೆ ಮಣಿಕಂಠ ಅಳಲು.. ತಿಲಕ್ ನಗರ ಪೊಲೀಸ್ ಠಾಣೆಗೆ ಪ್ರತಿನಿತ್ಯ ಬಂದು ಅಳಲು ತೋಡಿಕೊಳ್ತಾ ಇರೋ ಯುವಕ.. ತಮಿಳುನಾಡು ಮೂಲದ ಮಣಿಕಂಠ ಜಯನಗರದಲ್ಲಿ ವಾಸವಾಗಿದ್ದ.. ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡ್ತಿದ್ದ.. ತಿಂಗಳಿಗೆ 40-50 ಸಾವಿರ ಸಂಪಾದನೆ ಮಾಡ್ತಾ ಇದ್ದ ಮಣಿಕಂಠ..