‘ಸಿನಿಮಾದಲ್ಲಿ ಯಶ್​ ರಾಜಾಹುಲಿ’ ಎಂದ ನಿರ್ಮಾಪಕ ಕೆ. ಮಂಜು

ಯಶ್ ನಟನೆಯ ‘ರಾಜಾಹುಲಿ’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಈಗ ಹೊನ್ನರಾಜ್ ಹಾಗೂ ಶೃತಿ ಬಬಿತಾ ನಟಿಸಿರುವ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಜಾಹುಲಿ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಸಿನಿಮಾ ತಂಡ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿತು. ಸಿನಿಮಾ ಬಗ್ಗೆ ಇಡೀ ಚಿತ್ರತಂಡ ಮಾತನಾಡಿದೆ. ಈ ವೇಳೆ ನಿರ್ಮಾಪಕ ಕೆ.ಮಂಜು ಸಿನಿಮಾ ಟೈಟಲ್ ಬಗ್ಗೆ ಮಾತನಾಡಿದ್ದಾರೆ. ‘ರಾಜಕೀಯಕ್ಕೆ ಯಡಿಯೂರಪ್ಪ ರಾಜಾಹುಲಿ. ಸಿನಿಮಾಗೆ ಯಶ್ ಅವರೇ ರಾಜಾಹುಲಿ’ ಎಂದಿದ್ದಾರೆ ಅವರು.